ಗೌತಮ ಬುದ್ಧ ಅಧ್ಯಯನ ಪೀಠ ಮೇ 12ರಂದು ಏರ್ಪಡಿಸಿದ್ದ ಬುದ್ಧಪೂರ್ಣಿಮೆ ಕಾರ್ಯಕ್ರಮವನ್ನು ಶ್ರೀ ಪದ್ಮಾಲಯ ನಾಗರಾಜ್ ಉದ್ಘಾಟಿಸಿದರು. ಶ್ರೀಮತಿ ನಾಹಿದಾ ಜ಼ಮ್ ಜ಼ಮ್, ಪ್ರೊ. ಪ್ರಸನ್ನ ಕುಮಾರ್ ಕೆ., ಡಾ. ರವಿಕುಮಾರ್ ಬಾಗಿ, ಪ್ರೊ. ಶೇಟ್ ಪ್ರಕಾಶ್, ಡಾ. ನಾಗಭೂಷಣ ಬಗ್ಗನಡು ಇದ್ದಾರೆ.
ಏಪ್ರಿಲ್ 30ರಂದು ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜ಼ಮ್ ಜ಼ಮ್ ಮತ್ತಿತರರು ಬಸವೇಶ್ವರರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.
ಏಪ್ರಿಲ್ 14ರಂದು ನಡೆದ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಡಾ. ಜಿ. ಪ್ರಶಾಂತ್ ನಾಯಕ, ಪ್ರೊ. ಎಂ. ವೆಂಕಟೇಶ್ವರಲು, ನಾಹಿದಾ ಜ಼ಮ್ ಜ಼ಮ್, ಪ್ರೊ. ಕೆ. ಪ್ರಸನ್ನಕುಮಾರ್, ಪ್ರೊ. ಕೇಶವ ಇದ್ದಾರೆ.
ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವರು ಹಾಗೂ ತುಮಕೂರು ಸಂಸದರಾದ ವಿ. ಸೋಮಣ್ಣ ಅವರು ಏಪ್ರಿಲ್ 9ರಂದು ತುಮಕೂರು ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನ ಬಡಿಸಿ, ತಾವೂ ವಿದ್ಯಾರ್ಥಿಗಳೊಂದಿಗೆ ಊಟ ಸ್ವೀಕರಿಸಿದರು.
ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವರು ಹಾಗೂ ತುಮಕೂರು ಸಂಸದರಾದ ವಿ. ಸೋಮಣ್ಣ ಅವರು ಏಪ್ರಿಲ್ 9ರಂದು ತುಮಕೂರು ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನ ಬಡಿಸಿ, ತಾವೂ ವಿದ್ಯಾರ್ಥಿಗಳೊಂದಿಗೆ ಊಟ ಸ್ವೀಕರಿಸಿದರು.
ಡಾ. ಬಾಬು ಜಗಜೀವನರಾಮ್ ಅಧ್ಯಯನ ಪೀಠ ಹಾಗೂ ಸ್ನಾತಕೋತ್ತರ ಪ.ಜಾ./ಪ.ಪಂ.ಗಳ ಪುರುಷರ ವಿದ್ಯಾರ್ಥಿನಿಲಯದ ಸಹಯೋಗದಲ್ಲಿ ಏಪ್ರಿಲ್ 5ರಂದು ನಡೆದ ಡಾ. ಬಾಬು ಜಗಜೀವನರಾಮ್ ಅವರ 118ನೇ ಜನ್ಮದಿನಾಚರಣೆ
ವಾಣಿಜ್ಯಶಾಸ್ತ್ರ ಹಾಗೂ ಕಾನೂನು ಅಧ್ಯಯನ ವಿಭಾಗಗಳು ಏಪ್ರಿಲ್ 1ರಂದು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಭಾರತದ ಸರ್ವೋಚ್ಛ ನ್ಯಾಯಾಲಯದ ವಕೀಲರಾದ ಶ್ರೀ ಕೆ. ಆರ್. ಪ್ರದೀಪ್ ಉದ್ಘಾಟಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್ನಲ್ಲಿ ನಿರ್ಮಾಣಗೊಂಡಿರುವ ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಮಾರ್ಚ್ 28ರಂದು ಲೋಕಾರ್ಪಣೆಗೊಳಿಸಿದರು. ಗೃಹಸಚಿವ ಡಾ. ಜಿ. ಪರಮೇಶ್ವರ, ಶಾಸಕ ಬಿ. ಸುರೇಶ್ ಗೌಡ, ಶುಭ ಕಲ್ಯಾಣ್, ಪ್ರೊ. ಎಂ. ವೆಂಕಟೇಶ್ವರಲು, ನಾಹಿದಾ ಜ಼ಮ್ ಜ಼ಮ್., ಪ್ರೊ. ಪ್ರಸನ್ನ ಕುಮಾರ್ ಕೆ., ಪ್ರಭು ಜಿ. ಮತ್ತಿತರರು ಇದ್ದಾರೆ.