ತುಮಕೂರು ವಿವಿಯು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿಯಲ್ಲಿ ಬೆಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ಕೆ. ಸಿದ್ದಪ್ಪ, ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ನಾಹಿದಾ ಜಮ್ ಜಮ್, ಪ್ರೊ. ಪ್ರಸನ್ನ ಕುಮಾರ್ ಕೆ., ಡಾ. ಎ. ಎಂ. ಮಂಜುನಾಥ, ಇದ್ದಾರೆ. (05-09-2024)
ತುಮಕೂರು ವಿವಿ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿರುವ ‘ಉದ್ಯಮಶೀಲತಾ ಸಪ್ತಾಹ’ದ ಅಂಗವಾಗಿ ಮೂರು ದಿನಗಳ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿತ್ತು. ರಾಜೇಶ್ ಹಿರೇಮಠ್, ಡಾ. ಆರ್. ಎಲ್. ರಮೇಶ್ ಬಾಬು, ಪ್ರೊ. ಪ್ರಸನ್ನಕುಮಾರ್ ಕೆ., ಡಾ. ನೂರ್ ಅಫ್ಜಾ, ಕೋದಂಡರಾಮ ಎನ್., ಪ್ರೊ. ಮೋಹನ್ರಾಮ್, ಇಂಪಾ ಇದ್ದಾರೆ.(27-08-2024)
ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಆಯೋಜಿಸಿದ್ದ ‘ಕರ್ನಾಟಕ ರೈತ ಚಳುವಳಿಯಲ್ಲಿ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರ ಪಾತ್ರ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಉದ್ಘಾಟಿಸಿದರು. ಡಾ. ಧನಂಜಯ ಬಿ. ಜಿ., ಪ್ರೊ. ಪ್ರಸನ್ನಕುಮಾರ್ ಕೆ., ಪ್ರೊ. ಜಯಶೀಲ, ಡಾ. ಮುನಿರಾಜು ಎಂ., ಪ್ರೊ. ರವೀಂದ್ರ ಕುಮಾರ್ ಬಿ., ವಿಲಾಸ್ ಎಂ. ಕದ್ರೋಳ್ಕರ್ ಇದ್ದಾರೆ. (21-08-2024)
ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಡಿ. ದೇವರಾಜ ಅರಸು ಅಧ್ಯಯನ ಪೀಠ ಮತ್ತು ಹಿಂದುಳಿದ ವರ್ಗಗಳ ಕೋಶವು ಆಯೋಜಿಸಿದ್ದ ಶ್ರೀ ಡಿ. ದೇವರಾಜ ಅರಸು ಅವರ 109ನೇ ಜಯಂತಿಯನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಉದ್ಘಾಟಿಸಿದರು. ಪ್ರೊ. ಎಂ. ಗುರುಲಿಂಗಯ್ಯ, ನಾಹಿದಾ ಜಮ್ ಜಮ್, ಪ್ರೊ. ಪ್ರಸನ್ನಕುಮಾರ್ ಕೆ., ಪ್ರೊ. ಪರಶುರಾಮ ಕೆ. ಜಿ., ಡಾ. ಗುಂಡೇಗೌಡ ಇದ್ದಾರೆ. (20-08-2024)
ತುಮಕೂರು ವಿಶ್ವವಿದ್ಯಾನಿಲಯವು ನಿಟ್ಟೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಿದ್ದ ಸಂಶೋಧನೆಯನ್ನು ತಂತ್ರಜ್ಞಾನವಾಗಿ ಪರಿವರ್ತಿಸುವ ಕುರಿತ ಕಾರ್ಯಾಗಾರವನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಉದ್ಘಾಟಿಸಿದರು. ಡಾ. ಇಡ್ಯಾ ಕರುಣಾಸಾಗರ, ಡಾ. ಇಂದ್ರಾಣಿ ಕರುಣಾಸಾಗರ, ನಾಹಿದಾ ಜಮ್ ಜಮ್, ಡಾ. ಡಿ. ಸುರೇಶ್ ಇದ್ದಾರೆ. (19-08-2024)
ತುಮಕೂರು ವಿವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಆಯೋಜಿಸಿದ್ದ ‘ಶಾಸ್ತ್ರಜ್ಞಾನಕ್ಕೆ ತಂತ್ರಜ್ಞಾನದ ಚೌಕಟ್ಟು’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಉದ್ಘಾಟಿಸಿದರು. ರಾಘವೇಂದ್ರ ಪ್ರಸಾದ್ ಲಕ್ಷ್ಮಣ್, ನಾಹಿದಾ ಜಮ್ ಜಮ್, ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಇದ್ದಾರೆ. (13-08-2024)
ತುಮಕೂರು ವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಿದ್ದ 2023-24ನೇ ಸಾಲಿನ ಸ್ನಾತಕೋತ್ತರ ಅಂತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭವನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಉದ್ಘಾಟಿಸಿದರು. ಕ್ಯಾಲಿಸ್ಟೆನಿಕ್ಸ್ ಕ್ರೀಡೆಯ ಅಂತಾರಾಷ್ಟ್ರೀಯ ಕ್ರೀಡಾಪಟು ಸತ್ಯವತಿ ಎಸ್., ನಾಹಿದಾ ಜಮ್ ಜಮ್, ಪ್ರೊ. ಪ್ರಸನ್ನಕುಮಾರ್ ಕೆ., ಡಾ. ಎ. ಎಂ. ಮಂಜುನಾಥ, ಇನ್ನಿತರರು ಇದ್ದಾರೆ. (13-08-2024)