ನ್ಯಾಕ್ ಮಾನ್ಯತೆ | Accredited by NAAC: B+ Grade
| ಪರದೆ ವಾಚಕ Screen Reader | |

ಪರಿಚಯ - About University

ತುಮಕೂರು ವಿಶ್ವವಿದ್ಯಾನಿಲಯ 2004ರಲ್ಲಿ ಸ್ಥಾಪನೆಯಾಗಿ ದೇಶದ ಅತ್ಯಂತ ಕಿರಿಯ ವಿಶ್ವವಿದ್ಯಾನಿಲಯಗಳಲ್ಲಿ ಗಮನಾರ್ಹ ಸ್ಥಾನ ಪಡೆದಿದೆಯಲ್ಲದೇ ರಾಷ್ಟ್ರಮಟ್ಟದ ಹೆಸರಾಂತ ಉನ್ನತ ಶಿಕ್ಷಣ ಕಲಿಕಾ ಸಂಸ್ಥೆಗಳ ಜೊತೆಗೆ ಗುರುತಿಸಿಕೊಂಡಿದೆ. ಇದೊಂದು ರಾಜ್ಯ ವಿಶ್ವವಿದ್ಯಾನಿಲಯವಾಗಿದ್ದು ಗ್ರಾಮೀಣ ಹಿನ್ನೆಲೆಯಿಂದಲೇ ಬರುವ ಬಹುತೇಕ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯವನ್ನು ಪೂರೈಸುವುದಕ್ಕಾಗಿ ಸ್ಥಾಪಿತವಾಗಿದೆ.

ಆರಂಭವಾದಾಗಿನಿಂದಲೂ ಮೂಲಭೂತ ಸೌಕರ್ಯ ಹಾಗೂ ಶೈಕ್ಷಣಿಕ ಸಾಧನೆಗಳಲ್ಲಿ ಅಸಾಧಾರಣ ಬೆಳವಣಿಗೆಯನ್ನು ಕಾಣುತ್ತಲೇ ಬಂದಿದೆ. ಹದಿಮೂರು ವರ್ಷಗಳ ಕಡಿಮೆ ಅವಧಿಯಲ್ಲೇ ಯುಜಿಸಿ ಕಾಯ್ದೆ 1956ರ 12 (ಬಿ) ಹಾಗೂ ನ್ಯಾಕ್ ಮಾನ್ಯತೆಯಲ್ಲಿ ‘ಬಿ+’ ಶ್ರೇಣಿಯನ್ನು ಪಡೆಯುವುದರ ಜೊತೆಗೆ ಯುಜಿಸಿಯಿಂದ ರಾಷ್ಟ್ರೀಯ ಉತ್ಕøಷ್ಟತಾ ಸಂಸ್ಥೆಯಾಗಿ ಗುರುತಿಸಿಕೊಳ್ಳುವುದರಲ್ಲೂ ಯಶಸ್ವಿಯಾಗಿದೆ.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಈಚೆಗೆ ಬಿಡುಗಡೆ ಮಾಡಿರುವ ವಿಶ್ವವಿದ್ಯಾನಿಲಯಗಳ ಮೌಲ್ಯಾಂಕನ ಪಟ್ಟಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯವು 3-ಸ್ಟಾರ್ ಶ್ರೇಣಿಯನ್ನು ಪಡೆದಿದ್ದು, ‘ಉತ್ತಮ ಗುಣಮಟ್ಟದ ವಿಶ್ವವಿದ್ಯಾನಿಲಯ’ ಎಂಬ ಮಾನ್ಯತೆ ಪಡೆದಿದೆ. ಜ್ಞಾನ ಸೃಷ್ಟಿ, ಜ್ಞಾನ ಪ್ರಸರಣೆ ಹಾಗೂ ಸಾಮಾಜಿಕ ಒಳಗೊಳ್ಳುವಿಕೆ ಎಂಬ ಮೂರು ಸ್ಥೂಲ ವರ್ಗಗಗಳಲ್ಲಿ, ಸಂಶೋಧನೆ, ನಾವೀನ್ಯತೆ, ಬೋಧನೆ ಮತ್ತು ಉದ್ಯೋಗಾವಕಾಶ, ಮೂಲಸೌಕರ್ಯ, ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಪರಿಣಾಮ ಎಂಬ ಐದು ಕ್ಷೇತ್ರಗಳಲ್ಲಿ ವಿಶ್ವವಿದ್ಯಾನಿಲಯದ ಸಾಧನೆಗಳನ್ನು ಪರಿಗಣಿಸಿ ಈ ಮೌಲ್ಯಾಂಕನ ಮಾಡಲಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ, ವಾಣಿಜ್ಯ ಮತ್ತು ನಿರ್ವಹಣೆ ನಿಕಾಯಗಳಲ್ಲಿನ ಹದಿನೇಳು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗಗಳು; ಎರಡು ಘಟಕ ಕಾಲೇಜುಗಳಾದ ವಿಶ್ವವಿದ್ಯಾನಿಲಯ ಕಲಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜುಗಳು; ಹಾಗೂ ವಿಶ್ವವಿದ್ಯಾನಿಲಯದ ಸಂಯೋಜನೆ ಪಡೆದ ಎಂಬತ್ತಾರಕ್ಕೂ ಹೆಚ್ಚಿನ ಕಾಲೇಜುಗಳು ಸೇರಿ ಸಮಸ್ತ ತುಮಕೂರು ವಿಶ್ವವಿದ್ಯಾನಿಲಯವನ್ನು ರೂಪಿಸಿವೆ. ಉನ್ನತ ಗುಣಮಟ್ಟದ ಅಧ್ಯಾಪಕ ವರ್ಗ ವಿದ್ವತ್ ಪರಿಶೀಲಿತ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಹಾಗೂ ಇತರೆ ಮಾಧ್ಯಮಗಳಲ್ಲಿ ನಿಯತವಾಗಿ ವೈಜ್ಞಾನಿಕ ಮತ್ತು ಸಂಶೋಧನ ಪ್ರಬಂಧಗಳನ್ನು ಪ್ರಕಟಿಸುತ್ತಿರುವುದರ ಜೊತೆಗೆ ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಸಾಧನೆ ಹಿಗ್ಗುತ್ತಲೇ ಇರುವುದಕ್ಕೆ ನಿರಂತರ ಸಾಕ್ಷಿಯಾಗಿದೆ.

ಎಲ್ಲ ನಿಕಾಯಗಳಲ್ಲೂ ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿ ನೀಡುತ್ತಿದೆ. ವಿಶ್ವವಿದ್ಯಾನಿಲಯದ ಸಂಶೋಧನ ಹಿರಿಮೆಯಲ್ಲಿ 62 ಸಂಶೋಧನ ಕಾರ್ಯಯೋಜನೆಗಳಿದ್ದು ಇವು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‍ಟಿ), ವಿಜ್ಞಾನ ಮತ್ತು ತಾಂತ್ರಿಕ ಸಂಶೋಧನ ಮಂಡಳಿ (ಎಸ್‍ಇಆರ್‍ಬಿ), ಯುಜಿಸಿ, ಐಸಿಎಸ್‍ಎಸ್‍ಆರ್, ಐಸಿಎಚ್‍ಆರ್, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ (ವಿಜಿಎಸ್‍ಟಿ), ಮತ್ತು ಬ್ರಿಟಿಷ್ ಕೌನ್ಸಿಲ್ ಮೊದಲಾದ ಏಜನ್ಸಿಗಳ ಆರ್ಥಿಕ ನೆರವು ಪಡೆದಿವೆ.

ವಿಶ್ವವಿದ್ಯಾನಿಲಯದ ಪ್ರಕಟಣಾ ವಿಭಾಗವಾದ ಪ್ರಸಾರಾಂಗ ಇದುವರೆಗೆ ಅನೇಕ ಸಂಶೋಧನಾಧಾರಿತ ಕೃತಿಗಳನ್ನು ಪ್ರಕಟಿಸಿರುವುದರ ಜೊತೆಗೆ ವಿಶ್ವವಿದ್ಯಾನಿಲಯದ ಸುದ್ದಿಪತ್ರಿಕೆ ಹಾಗೂ ಮಾನವಿಕ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಾಗ್ಮಟ ಮತ್ತು ಕನ್ನಡ ಸಾಂಸ್ಕøತಿಕ ಅಧ್ಯಯನಕ್ಕೆ ಸಂಬಂಧಿಸಿದ ಲೋಕಜ್ಞಾನ ವೆಂಬ ಎರಡು ವಿದ್ವತ್ ಪರಿಶೀಲಿತ ನಿಯತಕಾಲಿಕಗಳನ್ನೂ ಹೊರತರುತ್ತಿದೆ.

ಒಟ್ಟಾರೆಯಾಗಿ ನಿಮ್ಮ ಉನ್ನತ ಶಿಕ್ಷಣದ ಎರಡು ವರ್ಷಗಳಿಗೆ ತುಮಕೂರು ವಿಶ್ವವಿದ್ಯಾನಿಲಯ ಸೂಕ್ತ ಸ್ಥಳವಾಗಿದೆ

Vision:

"TO CREATE A GENERATION OF HUMAN RESOURCES TO SUCCESSFULLY MEET THE GLOBAL CHALLENGES"

Mission:

 • To transform guiding vision into action plan through a band of community of teachers who are professionally competent and conscientiously upright.
 • To promote high quality of research for sustainable development of a society.
 • To bridge the gap between academic knowledge and professional skill.
 • To create adequate academic and physical infrastructure for high level performance.
 • To promote and develop outreach and extension activities for disadvantaged groups of society.
 • To introduce reformatory and innovative measures for balanced development.
 • To build institutional networking for knowledge sharing.
 • To initiate action to utilize the information and communication technology system.
 • To institutionalize good governance with proper accountability, transparency and collective participation.
 • To create adequate students support services for effective prosecution of their studies.
 • To promote and develop vocational education, career and life skill development.
 • To initiate and implement such other measures as are necessary for effective functioning of a university.

 

Tumkur University, established in the year 2004, has gained significance as one of the young universities in the country and has been recognized as an institution of higher learning on par with high profile national institutions. It is a State University, established to cater to the educational needs of Tumakuru district where the majority of students hail from the rural background.

Since its inception, the University has been witnessing tremendous growth in the development of its academic profile and infrastructural facilities. Within a short span of thirteen years, the University has been successful in being recognized as an Institute of National Eminence by the UGC, besides being recognized under section 12 (B) of the UGC Act 1956 and also successfully gaining 'B+' grade by the NAAC accreditation.

Recently, the university has been rated as a 'Three Star' institution under the Karnataka State Universities Rating Framework (KSURF) released by the Karnataka State Higher Education Council, Bengaluru. The evaluation was based on the criteria of Knowledge Production, Knowledge Transmission and Social Inclusiveness, besides taking into consideration the performance of the university in the domain of research, innovation, teaching, generating employment opportunities, providing basic amenities, inclusiveness and making social impact.

Seventeen Departments of Postgraduate Studies and Research in the faculties of Science and Technology, Arts, Commerce and Management; two Constituent Colleges, the University College of Arts and the University College of Science; and more than eighty-six affiliated Colleges constitute the universe of the Tumkur University. The ever swelling academic profile of the University constantly witnesses the highly qualified faculty of the University who have been regularly publishing scientific and research papers in refereed international journals and other new media, in addition to participating in conferences, workshops and other academic events.

The University offers PhD Programmes in all the faculties. The research profile of the University includes 62 Research projects from various funding agencies such as Indian Space Research Organization (ISRO), Department of Science and Technology (DST), Science and Engineering Research Board (SERB), UGC, ICSSR, ICHR, Vision Group on Science and Technology (VGST), Government of Karnataka, and the British Council, etc.

The Prasaranga, publication division of the University, has so far brought out several research-based books, besides bringing out a University Newsletter and two scholarly refereed journals including Pragmata: Journal of Human Sciences and Lokajnana: Journal of Cultural Studies in Kannada.

In addition, the University has had significant academic collaborations with several organizations and institutions of national importance including the Institute for Social and Economic Change, Bangalore; Tata Institute of Social Sciences, Mumbai; Intel, India; University of Rouen, France, National Law School of India University, Bangalore; and Mangalore University.

The gleaming history of the University owes its glory also to eminent scientists, Nobel Laureates, Spiritual Leaders including the 14th Dalai Lama who have visited the University. Our students and faculty have been immensely benefited by their interaction with scientists like Dr. APJ Abdul Kalam and several other thinkers and educationists

Strategy:

A well defined strategy is a primary requirement to achieve the desired objective. The time has now come to realize that the image of a university as a temple of ivory tower of closed academic learning for limited number of students has become the part of history. No university can isolate itself from the changes that are taking place elsewhere. Keeping all these factors in the mind the university in its wisdom has adopted the following strategy to achieve its Vision and Mission statement.


 


ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All

ಪ್ರಕಟಣೆಗಳು - Announcements ಹೆಚ್ಚು | All
ನಾಲ್ಕನೇ ವರ್ಷದ ಸ್ನಾತಕ ಹಾನರ್ಸ್ ಪದವಿ ಅಧ್ಯಯನಕ್ಕೆ ಇಚ್ಚಿಸಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಒದಗಿಸುವ ಕುರಿತು.
2023-24ನೇ ಸಾಲಿನ ಪಿ.ಹೆಚ್.ಡಿ ಕೊರ್ಸುವರ್ಕ್ ಉದ್ಘಾಟನೆ ಕುರಿತು.
13.06.2024 ರಂದು ಆಯೋಜಿಸಿರುವ "Online Sexual Abuse: Prevention Under POCSO" ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
ಸ್ನಾತಕ ಪದವಿಯ ಇತಿಹಾಸ ವಿಭಾಗದ 5 ಮತ್ತು 6 ನೇ ಸೆಮಿಸ್ಟರ್ ಪತ್ರಿಕೆಗಳ ಆಯ್ಕೆಯ ಕುರಿತು.
2023-24ನೇ ಸಾಲಿನ ಪಿ.ಹೆಚ್.ಡಿ ಕೊರ್ಸುವರ್ಕ್ ನ ವೇಳಾಪಟ್ಟಿಯ ಕುರಿತು.
ವಿವಿಧ ಸ್ನಾತಕ ಪದವಿಯ ಸೈದ್ಧಾಂತಿಕ ಪರೀಕ್ಷೆಗಳಲ್ಲಿ ನೀಡುತ್ತಿರುವ 24 ಪುಟಗಳುಳ್ಳ ಉತ್ತರ ಪತ್ರಿಕೆಗಳಲ್ಲಿನ ಪುಟಗಳ ಸಂಖ್ಯೆಯ ಕುರಿತು ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿ ಸಂಬಂಧ ಚರ್ಚಿಸಲು ಪ್ರಾಂಶುಪಾಲರುಗಳ ಸಭೆ ಏರ್ಪಡಿಸಿರುವ ಕುರಿತು.
2024-25ನೇ ಶೈಕ್ಷಣಿಕ ಸಾಲಿನ ಯೋಗಾ ಸೆರ್ಟಿಫಿಕೇಟ್ ಕೋರ್ಸಿನ ಪ್ರವೇಶಾತಿ ಕುರಿತು.
2023 ರ ಆಗಸ್ಟ್/ಸೆಪ್ಟೆಂಬರ್/ಅಕ್ಟೋಬರ್ ಮಾಹೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ (NEP) ನಡೆದ ವಿವಿಧ ಸ್ನಾತಕ ಪದವಿ ಪರೀಕ್ಷೆಗಳ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಿಸುತ್ತಿರುವ ಕುರಿತು.
2024 ರ ಫ್ರೆಬ್ರವರಿ/ಮಾರ್ಚ್/ಏಪ್ರಿಲ್ ಮಾಹೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ (NEP) ನಡೆದ ಬಿ.ಎಸ್ಸಿ.(ಫೈರ್ ಅಂಡ್ ಇಂಡಸ್ಟ್ರಿಯಲ್ ಸೇಫ್ಟಿ) ಪದವಿ ಪರೀಕ್ಷೆಗಳ ಪ್ರಥಮ ಸೆಮಿಸ್ಟರ್ ನ ಫಲಿತಾಂಶಕ್ಕೆ ಸಂಬಂಧಿಸಿದಂತೆ ಉತ್ತರ ಪತ್ರಿಕೆಗಳ ಛಾಯಾ ಪ್ರತಿ / ಮರುಮೌಲ್ಯಮಾಪನದ ಮಾಹಿತಿ ಕುರಿತು.
2023-24ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳ ಅಂಕಿ-ಅಂಶ ತಯಾರಿಸಲು ಮಾಹಿತಿಯನ್ನು ಒದಗಿಸುವ ಕುರಿತು.
ಸ್ನಾತಕ ಪದವಿ ಪ್ರೋಗ್ರಾಮ್ ಗಳ ಪಠ್ಯಕ್ರಮವನ್ನು ಸಿದ್ಧಪಡಿಸಲು Program Structure ಮಾದರಿಯೊಂದಿಗೆ ಸಲ್ಲಿಸುತ್ತಿರುವ ಕುರಿತು.
 
 
ಇ ಟೆಂಡರ್ :E-Tender:K.P.P.P
Karnataka Public Procurement Portal
ದರಪಟ್ಟಿ Quotations ಹೆಚ್ಚು | All
13-06-2024:  ತುಮಕೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ದಿನಾಂಕ: 21.06.2024 ರಂದು ಆಚರಿಸುವ ಅಂತಾರಾಷ್ಟ್ರೀಯ ಯೋಗಾ ದಿನಾಚರಣೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಶಾಮಿಯಾನ/ಮೈಕ್ ಸೆಟ್ಮತ್ತು ಇತರೆ ಅಗತ್ಯ ವಸ್ತುಗಳನ್ನು ಬಾಡಿಗೆಗೆ ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 19-06-2024 )

10-06-2024:  ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗಕ್ಕೆ ಅಗತ್ಯವಿರುವ "ಕಲರ್ ಪ್ರಿಂಟರ್" ಅನ್ನು ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 17-06-2024 )

07-06-2024:  ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಅಂತರ ವಿಭಾಗಗಳ ಕ್ರೀಡಾ ಸ್ಪರ್ಧೆಗಳನ್ನು ನಡೆಸುತ್ತಿದ್ದು ಕಾರ್ಯಕ್ರಮಕ್ಕೆ ಅಗತ್ಯವಿರುವ ಶಾಮಿಯಾನ/ಮೈಕ್ ಸೆಟ್ ಇತರೆ ವಸ್ತುಗಳನ್ನು ಬಾಡಿಗೆಗೆ ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 17-06-2024 )

07-06-2024:  ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭಕ್ಕೆ ಅಗತ್ಯವಿರುವ ಟ್ರೋಫಿ,ಮೇಡಲ್ಸ್,ನೆನಪಿನ ಕಾಣಿಕೆಗಳನ್ನು ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 17-06-2024 )

07-06-2024:  ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳ ಕ್ರೀಡಾ ಸ್ಪರ್ಧೆಗಳ ಉದ್ಘಾಟನಾಸಮಾರಂಭ ಮತ್ತು ಬಹುಮಾನ ವಿತರಣಾ ಸಮಾರಂಭಕ್ಕೆ ಉಪಹಾರ/ಊಟ ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 17-06-2024 )

 


TUMKUR UNIVERSITY Vishwavidyanilaya Karyalaya
B.H Road, Tumkur 572103, Karnataka, INDIA
e-mail: tumkuruniversity2004@gmail.com
Exam Section e-mail: registrarevaluationtut@gmail.com
e-mail Document Verification (Exams): tutdocveri@gmail.com

ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ- ತುಮಕೂರು ವಿಶ್ವವಿದ್ಯಾಲಯ, ತುಮಕೂರು - © Copyright 2024