ತುಮಕೂರು ವಿಶ್ವವಿದ್ಯಾನಿಲಯ

ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ

ಡಾ.ಜಗದಾಂಬ ಚಿವುಕುಲ ಕಟ್ಟಡ, ವಿಶ್ವವಿದ್ಯಾನಿಲಯ ಆವರಣ, ಬಿ.ಹೆಚ್.ರಸ್ತೆ, ತುಮಕೂರು 572 103

 

ಮಹಾಮಾನವತಾವಾದಿ ಭಾರತ ಕಂಡ ಅದ್ವೀತಿಯ ನಾಯಕ, ಅಪ್ರತಿಮ ಹೋರಾಟಗಾರ, ಸಾಮಾಜಿಕ ಪರಿವರ್ತನೆಯ ಹರಿಕಾರ ಹಾಗೂ ನವ ಭಾರತ ಕಂಡ ಅಗ್ರಗಣ್ಯ ನಾಯಕ, ಭಾರತರತ್ನ ಸಂವಿಧಾನ ಶಿಲ್ಪಿಯಾದ ಡಾ.ಬಿ.ಆರ್ ಅಂಬೇಡ್ಕರ್ರವರ ತತ್ವಾದರ್ಶಗಳನ್ನು ಹಾಗು ಅವರ ಸವiಸಮಾನತೆಯ ಸಮಾಜ ನಿರ್ಮಾಣ ಮಾಡುವ ದೂರದೃಷ್ಠಿಯಂತೆ ದಲಿತ, ಹಿಂದುಳಿದ, ಮತೀಯ ಅಲ್ಪ ಸಂಖ್ಯಾತ ಹಾಗೂ ಶೋಷಿತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ, ಸಿಬ್ಬಂದಿಗಳ ಸರ್ವತೋಮುಖ ಅಭಿವೃದ್ದಿಯನ್ನು ಆದ್ಯತೆಯನ್ನಾಗಿಸಿಕೂಂಡು ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಮೌಲ್ಯಯುತವಾದ ಹತ್ತು-ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಉದ್ದೇಶಗಳು

 • ಡಾ.ಬಿ.ಆರ್.ಅಂಬೇಡ್ಕರ್ರವರ ವಿಚಾರಧಾರೆಗಳನ್ನು ಮತ್ತು ಚಿಂತನೆಗಳನ್ನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಪ್ರಚುರಪಡಿಸುವುದು.
 • ಡಾ.ಬಿ.ಆರ್. ಅಂಬೇಡ್ಕರ್ರವರ ತತ್ತ್ವಸಿದ್ದಾಂತ ಮತ್ತು ಚಿಂತನೆಗಳ ಹಾದಿಯಲ್ಲಿ ಸಂಶೋಧನೆ / ವಿಷಯಾಧಾರಿತ ಮಾದರಿ ರಚನೆ / ಪಠ್ಯಕ್ರಮವನ್ನು ಕೈಗೊಳ್ಳಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದು.
 • ಸಮಾಜದ ಬಡ ಮತ್ತು ದುರ್ಬಲವರ್ಗದವರ ಶ್ರೇಯೋಭಿವೃದ್ಧಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ರವರ ವಿಚಾರಧಾರೆಗಳ ಪ್ರಸ್ತುತತೆಯ ಬಗ್ಗೆ ಸ್ಥಳೀಯ ಜನವಸತಿ ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಸಂವೇದನಾಶೀಲರನ್ನಾಗಿಸುವುದು.
 • ಕೇಂದ್ರವು ಡಾ.ಬಿ.ಆರ್.ಅಂಬೇಡ್ಕರ್ರವರ ಚಿಂತನೆಗಳ ಸಂಬಂಧಿತ ವಿಷಯಗಳ ಕುರಿತು ಸೈದ್ಧಾಂತಿಕ ಮತ್ತು ಕ್ರಿಯಾಧಾರಿತ ಸಂಶೋಧನೆಗಳನ್ನು ತೆಗೆದುಕೊಳ್ಳುತ್ತದೆ.
 • ಸಮಾಜದ ಅಂಚಿಗೆ ತಳ್ಳಲ್ಪಟ್ಟಿರುವ ವರ್ಗದವರ ಸಂಘಟನೆಗಾಗಿ ಮಹತ್ವದ ಕೊಡುಗೆ ನೀಡಿದ ಚಳುವಳಿಗಾರರು/ ಬರಹಗಾರರನ್ನು ಗುರುತಿಸಿ, ಅವರ ಚಿಂತನೆಗಳನ್ನು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆಯನ್ನು ಒದಗಿಸುವುದು.

ಪೋಟೋಗ್ಯಾಲರಿ (ಮ್ಯೂಸಿಯಂ):

ಡಾ.ಬಿ.ಅರ್.ಅಂಬೇಡ್ಕರ್ಮತ್ತು ಡಾ.ಬಾಬು ಜಗಜೀವನ್ರಾಂ ರವರ ಕುರಿತಾದ ಸಂಕ್ಷಿಪ್ತ ಜೀವನ ಚರಿತ್ರೆಯ ಹಲವು ಕಾಲಘಟ್ಟಗಳ ಹಾಗೂ ಮಹತ್ವದ ಸನ್ನಿವೇಶಗಳನ್ನು ಬಿಂಬಿಸುವ ಬಹಳ ಅಪರೂಪದ ಛಾಯಾ ಚಿತ್ರಗಳನ್ನು ಹಲವು ಭಾಗಗಳಿಂದ ಸಂಗ್ರಹಿಸಿ ಅಧ್ಯಯನ ಕೇಂದ್ರದಲ್ಲಿನ ಮ್ಯೂಸಿಯಂನ ಗ್ಯಾಲರಿಯಲ್ಲಿ ಸಂಗ್ರಹಿಸಲಾಗಿದೆ. ಮತ್ತೊಂದು ವಿಶೇಷವೆಂದರೆ ದೇಶದ ಶೋಷಿತ ಸಮುದಾಯದವರ ಏಳಿಗೆಗಾಗಿ ದುಡಿದ ಹಾಗೂ ಶೋಷಿತ ಸಮುದಾಯಕ್ಕೆ ಮಹತ್ವದ ಕೊಡುಗೆ ನೀಡಿದ ದಾರ್ಶನಿಕರಾದ ಗೌತಮ ಬುದ್ದರ, ಜೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ, ಜಗಜ್ಯೋತಿ ಶ್ರೀ ಬಸವೇಶ್ವರ, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಶ್ರೀ ನಾರಾಯಣಗುರು, ಛತ್ರಪತಿ ಶಾಹು ಮಹಾರಾಜ್, ನಾಲ್ವಡಿಕೃಷ್ಣರಾಜ ಒಡೆಯರು ಇನ್ನಿತರ ಮಹಾನ್ ಸಾಮಾಜಿಕ ಪರಿವರ್ತನೆಯ ರೂವಾರಿಗಳ ಛಾಯಾ ಚಿತ್ರಗಳನ್ನು ಹಾಗೂ ಅವರಿಗೆ ಸಂಬಂಧಿಸಿದ ಅಡಿಟಿಪ್ಪಣಿ (ಮಾಹಿತಿ)ಗಳನ್ನು ಒಳಗೊಂಡಿರುವ ಭಾವಚಿತ್ರಗಳನ್ನು ಸಂಗ್ರಹಿಸಿ ಅಧ್ಯಯನ ಕೇಂದ್ರದಲ್ಲಿ ಇಡಲಾಗಿದೆ. ಇದರಿಂದ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡುವ ಸಂದರ್ಶಕರಿಗೆ, ಸಂಶೋಧಕರಿಗೆ ಯುವ ಹೋರಾಟಗಾರರಿಗೆ ವಿದ್ಯಾರ್ಥಿಗಳಿಗೆ ಶೋಷಿತ ಸಮುದಾಯಗಳ ಏಳಿಗೆಗಾಗಿ ದುಡಿದ ದಾರ್ಶನಿಕರುಗಳ ಮಹತ್ವದ ವಿಷಯಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.

ಗ್ರಂಥಾಲಯ:

ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ವಿಶ್ವವಿದ್ಯಾನಿಲಯದಲ್ಲಿನ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಓದುಗರನ್ನು ಕೇಂದ್ರವಾಗಿರಿಸಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ರವರ ಕುರಿತಾದ ಪುಸ್ತಕಗಳು, ವಿಶೇಷವಾಗಿ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳ ಸಂಪುಟಗಳು ಹಾಗು ಶೋಷಿತ ಸಮುದಾಯಕ್ಕೆ ಮಹತ್ವದ ಕೊಡುಗೆ ನೀಡಿದ ದಾರ್ಶನಿಕರಾದ ಗೌತಮ ಬುದ್ದ, ಜೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ, ಜಗಜ್ಯೋತಿ ಶ್ರೀ ಬಸವೇಶ್ವರ, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಶ್ರೀ ನಾರಾಯಣಗುರು, ಛತ್ರಪತಿ ಶಾಹು ಮಹಾರಾಜ್, ನಾಲ್ವಡಿಕೃಷ್ಣರಾಜ ಒಡೆಯರು ಇನ್ನಿತರ ಮಹಾನ್ ಸಾಮಾಜಿಕ ಪರಿವರ್ತನೆಯ ರೂವಾರಿಗಳ ಮತ್ತು ಶೋಷಿತ ವರ್ಗಗಳಿಗೆ ಸಂಬಂಧಿಸಿದ ಸವiಕಾಲೀನ ಸಮಸ್ಯೆಗಳ ಕುರಿತಾದ 800ಕ್ಕೂ ಹೆಚ್ಚು ಪುಸ್ತಕಗಳು ಲಭ್ಯವಿದ್ದು ವಿದ್ಯಾರ್ಥಿಗಳ ಹಾಗೂ ತುಮಕೂರಿನ ನಾಗರಿಕರ ಮತ್ತು ಓದುಗರ ಜ್ಞಾರ್ನಾಜನೆಗೆ ಸಹಕಾರಿಯಾಗಿದೆ.

ಸಾಕ್ಷ್ಯಾಚಿತ್ರ ನಿರ್ಮಾಣ:

ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ದಲಿತವರ್ಗಕ್ಕೆ ಸೇರಿದ ಅಪರೂಪದ ವ್ಯಕ್ತಿತ್ವವುಳ್ಳ ದಲಿತ ಮಹಿಳೆ ಡಾ.ಸೂಲಗಿತ್ತಿ ನರಸಮ್ಮನವರ ಜೀವನ ಸಾಧನೆಗಳನ್ನು ಕುರಿತಾದ ಸಾಕ್ಷ್ಯಾಚಿತ್ರ ನಿರ್ಮಾಣದ ಚಿತ್ರೀಕರಣದ ಕಾರ್ಯವು ಯಶಸ್ವಿಯಾಗಿ ಮೂಡಿ ಬಂದಿದ್ದು ಬಿಡುಗಡೆಗೊಳಿಸಲಾಗಿದೆ.

ಕಿರು ಸಂಶೋಧನೆ:

ಡಾ.ಬಿ.ಆರ್ಅಂಬೇಡ್ಕರ್ ಅಧ್ಯಯನ ಕೇಂದ್ರವು ತುಮಕೂರು ಜಿಲ್ಲೆಯಲ್ಲಿನ ಸಾಮಾಜಿಕ ತಲ್ಲಣಗಳನ್ನು ಹಾಗೂ ಪ್ರಚಲಿತ ಘಟನೆಗಳನ್ನು ಕೇಂದ್ರವಾಗಿರಿಸಿಕೊಂಡು ವೈಜ್ಞಾನಿಕ ಮತ್ತು ವೈಚಾರಿಕ ತಳಹದಿಯ ಮೇಲೆ ವಿನೂತನವಾದ ಕಿರುಸಂಶೋಧನೆಗಳನ್ನು ವಿಶ್ವವಿದಾನಿಲಯದ ಅದ್ಯಾಪಕರುಗಳು ಕೆಳಕಂಡ ಶೀರ್ಷಿಕೆಯ ಮೇಲೆ ಸಂಶೋಧನೆಯನ್ನು ಕೈಗೊಂಡಿದ್ದಾರೆ.

 • ಡಾ.ಅಣ್ಣಮ್ಮ, ಪ್ರಾಧ್ಯಾಪಕರು, ಡಾ.ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತು.ವಿ.ವಿದಲಿತ ಮಹಿಳೆಯರ ಸಾಂಸ್ಕ್ರತಿಕ ಆಯಾಮಗಳು (ವಿಶೇಷವಾಗಿ ಪಾವಗಡ ಮತ್ತು ಮಧುಗಿರಿ ತಾಲ್ಲೂಕು ಕುರಿತು).
 • ಡಾ.ಬಸವರಾಜು ಜಿ, ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತು.ವಿ.ವಿ - ಕೊರಚ ಮತ್ತು ಕೊರಮ ಸಮುದಾಯಗಳ ಸಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳು: ತುವiಕೂರು ಜಿಲ್ಲೆ ಒಂದು ಅಧ್ಯಯನ.
 • ಡಾ.ಚಿಕ್ಕಣ್ಣ, ಸಹಾಯಕ ಪ್ರಾಧ್ಯಾಪಕರು, ಇತಿಹಾಸ ಮತ್ತು ಪುರಾತತ್ವಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತು.ವಿ.ವಿ - ಸ್ಥಳೀಯ ಆಳ್ವಿಕೆಯಲ್ಲಿ ಕೆಳವರ್ಗಗಳ ಪಾಲ್ಗೊಳ್ಳುವಿಕೆ: ಒಂದು ಚಾರಿತ್ರಿಕ ಅಧ್ಯಯನ (ತುಮಕೂರು ಜಿಲ್ಲೆ).
 • ಡಾ.ಮಹಾಲಿಂಗ ಕೆ, ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತು.ವಿ.ವಿ - ದಲಿತ ರಾಜಕಾರಣಕ್ಕೆ ದಲಿತ ಚಳುವಳಿಗಳ ಕೊಡುಗೆ (ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಅಧ್ಯಯನ).
 • ಡಾ.ಮುನಿರಾಜು ಎಂ, ಸಹಾಯಕ ಪ್ರಾಧ್ಯಾಪಕರು, ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತು.ವಿ.ವಿ - ತುಮಕೂರು ಜಿಲ್ಲೆಯ ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡದ ವಸತಿ ನಿಲಯಗಳು: ಶೈಕ್ಷÀಣಿಕ ಆವರಣವನ್ನಾಗಿ ಪರಿವರ್ತಿಸುವ ಸಾಧ್ಯತೆಗಳು (ವಿಶೇಷವಾಗಿ ತುಮಕೂರು ವಸತಿನಿಲಯಗಳಿಗೆ ಸಂಬಂಧಿಸಿದಂತÉ).
 • ಡಾ. ಪಿ.ಎಂ ಗಂಗಾಧರಯ್ಯ, ಸಹಾಯಕ ಪ್ರಾಧ್ಯಾಪಕರು, ಡಾ.ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತು.ವಿ.ವಿ - ತುಮಕೂರು ಜಿಲ್ಲೆಯ ಬುಡಬುಡಕೆಯ ಬುಡಕಟ್ಟು ಸಮುದಾಯ: ಒಂದು ಮುನ್ನೋಟ.
 • ಶ್ರೀ.ಮೋಹನ್ ಪ್ರಕಾಶ್, ಸಹಾಯಕ ಪ್ರಾಧ್ಯಾಪಕರು, ಆಂಗ್ಲ ವಿಭಾಗ, ಕಲಾ ಕಾಲೇಜು ವಿಶ್ವವಿದ್ಯಾನಿಲಯ ಘಟಕ ಕಾಲೇಜು, ತು.ವಿ.ವಿ - ವಿಶೇಷ ಘಟಕ ಯೋಜನೆ ಮತ್ತು ಉಪಘಟಕ ಯೋಜನೆಯ ಪರಿಣಾಮ ಗಳು: ಒಂದು ಅಧ್ಯಯನ (ವಿಶೇಷವಾಗಿ ತುಮಕೂರು ವಿಶ್ವವಿದ್ಯಾನಿಲಯದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ).
 • ಡಾ. ನಾಗಭೂಷಣ, ಸಹಾಯಕ ಪ್ರಾಧ್ಯಾಪಕರು, ಡಾ.ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತು.ವಿ.ವಿ - ಸಮಕಾಲೀನ ದಲಿತತ್ವವನ್ನು ರೂಪಿಸುವಲ್ಲಿ ದಲಿತ ಪುರಾಣಗಳ ಪ್ರಭಾವ (ತುಮಕೂರು ಜಿಲ್ಲೆ ಅನುಲಕ್ಷಿಸಿದಂತೆ).
 • ಶ್ರೀಮತಿ ಜಿ. ದಾಕ್ಷಾಯಿಣಿ, ಸಹಾಯಕ ಪ್ರಾಧ್ಯಾಪಕರು, ಆಂಗ್ಲ ವಿಭಾಗ, ವಿಜ್ಞಾನ ಕಾಲೇಜು ವಿಶ್ವವಿದ್ಯಾನಿಲಯ ಘಟಕ ಕಾಲೇಜು, ತು.ವಿ.ವಿ - Status of Domestic Workers In Tumkur City : With Special Reference to Dalit Women.
 • ಡಾ. ರಾಜಾ ನಾಯ್ಕ ಹೆಚ್ , ಸಹಾಯಕ ಪ್ರಾಧ್ಯಾಪಕರು, ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತು.ವಿ.ವಿ - A study on water borne disease among Dalit families (with special reference Sira Taluk.
 • ಕುಮಾರ ಬಿ, ಸಹಾಯಕ ಗ್ರಂಥಪಾಲಕರು, ಗ್ರಂಥಾಲಯ ವಿಭಾಗ, ತು.ವಿ.ವಿ - E-Resources and open library systems: Challenges and opportunities for the Dalit P.G Students (with special reference to Tumkur University).
 • ಡಾ.ಎಸ್. ನಾಗರಾಜು, ಸಹಾಯಕ ಪ್ರಾಧ್ಯಾಪಕರು, ಜೀವ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತು.ವಿ.ವಿ - Creating employment opportunities through hands and training in basic bio-chemical techniques: A possible system module for SC, ST and OBC Students.
 • ಡಾ.ಲೋಕೇಶ್ ಎಂ.ಯು, ಸಹಾಯಕ ಪ್ರಾಧ್ಯಾಪಕರು, ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತು.ವಿ.ವಿ - Entrepreneurship: Issues and challenges for Dalits (with special reference to Tumkur City).
 • ಡಾ. ಕೃಷ್ಣ, ಸಹಾಯಕ ಪ್ರಾಧ್ಯಾಪಕರು, ಜೈವಿಕ ತಂತ್ರಜ್ಞಾನ ವಿಭಾಗ, ವಿಜ್ಞಾನ ಕಾಲೇಜು ವಿಶ್ವವಿದ್ಯಾನಿಲಯ ಘಟಕ ಕಾಲೇಜು, ತು.ವಿ.ವಿ - Health seeking behavior among slum dwellers in Tumkur City.
 • ಡಾ.ದೇವರಾಜಪ್ಪ ಎಸ್, ಸಹಾಯಕ ಪ್ರಾಧ್ಯಾಪಕರು, ವಾಣಿಜ್ಯ ವಿಭಾಗ, ಕಲಾ ಕಾಲೇಜು ವಿಶ್ವವಿದ್ಯಾನಿಲಯ ಘಟಕ ಕಾಲೇಜು, ತು.ವಿ.ವಿ - A study on current economic scenario among Dalit family: Opportunities and Challenges (with special reference to Pavagada Taluk, Tumkur District).
 • ಡಾ.ರಾಜೇಂದ್ರ ಬಾಬು.ಹೆಚ್, ಸಹಾಯಕ ಪ್ರಾಧ್ಯಾಪಕರು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತು.ವಿ.ವಿ - Cultural constitution as a ladder of Social mobility (with special reference to some selected writings of Dr.B.R.Ambedkar).

 

ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಕೈಗೊಂಡ ಕಾರ್ಯಚಟುವಟಿಕೆಗಳು

 • ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಇವುಗಳ ಸಂಯುಕ್ತ ಅಶ್ರಯದಲ್ಲಿ ದಿನಾಂಕ: 19.02.2014 ರಂದು ಸಾಮಾಜಿಕ ಸಮಾನತೆ ಹಾಗೂ ಆಧುನಿಕ ಸಾವಾಲುಗಳು ಎನ್ನುವ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ತುಮಕೂರು ವಿಶ್ವವಿದ್ಯಾನಿಲಯದ ಸರ್. ಎಂ, ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ರವರ 123ನೇ ಮತ್ತು ಡಾ.ಬಾಬೂ ಜಗಜೀವನ್ ರಾಮ್ ರವರ 107ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಏಪ್ರಿಲ್, 14.2014 ರಂದು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ರವರ 58ನೇ ಮಹಾ ಪರಿನಿಬ್ಬಾಣ ದಿನ ಆಚರಣೆ ಪ್ರಯುಕ್ತ ಡಿಸೆಂಬರ್, 06.2014 ರಂದು ಭಾರತದಲ್ಲಿ ಶೋಷಿತ ವರ್ಗಗಳ ಐತಿಹಾಸಿಕ ಹೆಜ್ಜೆಗುರುತುಗಳು ಮತ್ತು ಸಮಕಾಲೀನ ಸವಾಲುಗಳು ಎನ್ನುವ ವಿಷಯದ ಕುರಿತು ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಸೆರಾ-ಜೇ ಮೋನಾಸ್ಟಿಕ್ ವಿಶ್ವವಿದ್ಯಾನಿಲಯ, ಬೈಲಕುಪ್ಪೆ ಮೈಸೂರು. ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ:21.12.2014 ರಂದು “Ethics in new millennium: Buddhist Perspectives” ಎನ್ನುವ ವಿಷಯದ ಕುರಿತು ಒಂದು ದಿನದ ಅಂತರಾಷ್ಟ್ರೀಯ ಸಮ್ಮೇಳನವನ್ನು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಯುವ ಬರಹಗಾರರಿಗಾಗಿ ಫೆಬ್ರವರಿ, 21 & 22.2015 ರಂದು ಬಹುಜನ ಸಾಹಿತ್ಯ ತರಬೇತಿ ಕಮ್ಮಟಎನ್ನುವ ವಿಷಯದ ಕುರಿತು ಎರಡು ದಿನಗಳ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ರವರ 124ನೇ ಮತ್ತು ಡಾ.ಬಾಬೂ ಜಗಜೀವನ್ ರಾಮ್ ರವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ:14.04.2015 ರಂದು ತುಮಕೂರು ವಿಶ್ವವಿದ್ಯಾನಿಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ತುಮಕೂರು ವಿಶ್ವವಿದ್ಯಾನಿಲಯದ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ದಿನಾಂಕ:23.04.2015 ರಂದು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರವನ್ನು ವಿಶ್ವವಿದ್ಯಾನಿಲಯದ ಡಾ.ಪಿ ಸದಾನಂದಮಯ್ಯ ಕಟ್ಟಡದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಮೈಸೂರು ವಿ.ವಿ. ಡಾ.ಬಾಬೂ ಜಗಜೀವನ್ ರಾಮ್ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ದಿನಾಂಕ: 18ನೇ ಆಗಸ್ಟ್, 2015 ರಂದುದಲಿತ ಬದುಕಿನ ಸಾಂಸ್ಕøತಿ ಸವಾಲುಗಳುಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ತುಮಕೂರು ವಿಶ್ವವಿದ್ಯಾನಿಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರವು ಮಾದಿಗ ದಂಡೋರ ಯುವ ವಿದ್ಯಾರ್ಥಿ ವೇದಿಕೆ ಸಹಯೋಗದೊಂದಿಗೆ ದಿನಾಂಕ:30.08.2015 ರಂದು ತುಮಕೂರು ಜಿಲ್ಲೆಯ ಗ್ರಾಮಪಂಚಾಯಿತಿಗೆ ನೂತನವಾಗಿ ಆಯ್ಕೆಯಾಗಿರುವ ಆಯ್ದ ದಲಿತ ಗ್ರಾಮಪಂಚಾಯಿತಿ ಸದಸ್ಯರುಗಳಿಗೆ ಗ್ರಾಮಪಂಚಾಯಿತಿ ಮತ್ತು ಸಾಮಾಜಿಕನ್ಯಾಯ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ವಿಸ್ತರಣಾ ಚಟುವಟಿಕೆ ಕಾರ್ಯಕ್ರಮದ ಅಡಿಯಲ್ಲಿ ತುಮಕೂರು ಜಿಲ್ಲೆಯ ದಲಿತ ಯುವಕರಿಗಾಗಿ 12ನೇ ಮತ್ತು 13ನೇ ಸೆಪ್ಟೆಂಬರ್, 2015 ರಂದು ಶೋಷಿತ ಸಮುದಾಯಗಳ ಇತಿಹಾಸ ಮತ್ತು ಸಮಕಾಲೀನ ಸಮಸ್ಯೆಗಳು ಎನ್ನುವ ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ತುಮಕೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ವಿಸ್ತರಣಾ ಚಟುವಟಿಕೆ ಕಾರ್ಯಕ್ರಮದ ಅಡಿಯಲ್ಲಿ ತುಮಕೂರು ನಗರದಲ್ಲಿ ದಿನಾಂಕ: 19.09.2015 ರಿಂದ 25.11.2015 ರವರೆಗೆ ವಿವಿಧ ಕೊಳಗೇರಿಗಳಾದ ಮಾರಿಯಮ್ಮ ನಗರ, ಕುರಿಪಾಳ್ಯ, ಡಾ.ಬಿ.ಆರ್.ಅಂಬೇಡ್ಕರ್ ನಗರ, ಜಯಪುರ, ಶಿರಾಗೇಟ್ ಬಡಾವಣೆ ಮತ್ತು ಹುತ್ರಿದುರ್ಗ ಗ್ರಾಮ ಪಂಚಾಯಿತಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ದಿನಾಂಕ: 27ನೇ ಅಕ್ಟೋಬರ್, 2015 ರಂದು ಮಹರ್ಷಿ ವಾಲ್ಮೀಕಿಯವರ ಜಯಂತಿಯ ಅಂಗವಾಗಿ ರಾಮಾಯಣ: ಭಿನ್ನಪರಂಪರೆಗಳು ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ, ಅಂಬೇಡ್ಕರ್ ಮತ್ತು ಪ್ರಜಾತಂತ್ರಎಂಬ ವಿಷಯದ ಕುರಿತು ದಿನಾಂಕ: 26ನೇ ನವೆಂಬರ್, 2015 ರಂದು ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.
 • ತುಮಕೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ದಿನಾಂಕ: 14.04.2016 ರಂದು ಡಾ.ಬಿ.ಆರ್ ಅಂಬೇಡ್ಕರ್ ರವರ 125 ನೇ ಹಾಗೂ ಡಾ. ಬಾಬೂ ಜಗಜೀವನ ರಾಂ ರವರ 109ನೇ ಜನ್ಮ ದಿನಾಚರಣೆ ಯನ್ನು ವಿಶ್ವವಿದ್ಯಾನಿಲಯದ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
 • ತುಮಕೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಡಾ.ಡಿ.ವಿ ಗುಂಡಪ್ಪ ಅಧ್ಯಯನ ಕೇಂದ್ರಗಳು ಲಡಾಯಿ ಪ್ರಕಾಶನ ಗದಗ್, ನೆಲಸಿರಿ ಸಾಂಸ್ಕøತಿಕ ವೇದಿಕೆ ಮತ್ತುತುಮಕೂರಿನ ಜೆನ್ ಟೀಂ ಸಂಸ್ಥೆಯವರ ಸಹಯೋಗದೊಂದಿಗೆ ಸಮಕಾಲೀನ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಭರವಸೆಯ ಧನಿಯಾಗಿದ್ದ ತುಮಕೂರು ಜಿಲ್ಲೆಯ ಕವಿ ದಿ.ಎನ್.ಕೆ ಹನುಮಂತಯ್ಯ ನವರ ಸಮಗ್ರ ಕಾವ್ಯದ ಬಿಡುಗಡೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ: 10.07.2016 ಭಾನುವಾರದಂದು ತುಮಕೂರು ವಿಶ್ವವಿದ್ಯಾನಿಲಯದ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
 • ಪ್ರೊ.ಬಿ.ಕೃಷ್ಣಪ್ಪನವರ ಸಾಮಾಜಿಕ ಹೋರಾಟ ಮತ್ತು ಸಾಂಸ್ಕøತಿಕ ಸಂದೇಶಗಳನ್ನು ಇಂದಿನ ಪ್ರಜ್ಞಾವಂತ ಯುವಜನತೆಗೆ ತಲುಪಿಸುವ ಅಗತ್ಯತೆಯನ್ನು ಅರಿತು ತುಮಕೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರವು ಪ್ರೊ. ಬಿ ಕೃಷ್ಣಪ್ಪ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಪ್ರೊ.ಬಿ ಕೃಷ್ಣಪ್ಪನವರ ಸಾಮಾಜಿಕ ಹೋರಾಟಗಳ ಕುರಿತು ಒಂದು ದಿನದ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ: 27.09.2016ರಂದು ತುಮಕೂರು ವಿಶ್ವವಿದ್ಯಾನಿಲಯದ ಡಾ.ಶ್ರೀ.ಶ್ರೀ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
 • ತುಮಕೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ವಿಶೇಷ ಘಟಕ ಯೋಜನೆ ಹಾಗೂ ಸ್ನಾತಕೋತ್ತರ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಇವರ ಸಹಯೋಗದೊಂದಿಗೆ ಸಂವಿಧಾನ ದಿನಾಚರಣೆಯ ಪ್ರಯುಕ್ತ 26ನೇ ನವೆಂಬರ್, 2016 ರಂದು ಸಂವಿಧಾನ ಮತ್ತು ಅಭಿವೃದ್ಧಿ: ಸಮಕಾಲೀನ ಸವಾಲುಗಳು ಎನ್ನುವ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಕಾಯಕ ಯೋಗಿ ಸಿದ್ದರಾಮನ 844ನೇ ಜನ್ಮ ಜಯಂತಿ ಅಂಗವಾಗಿ ದಿನಾಂಕÀ 7ನೇ, ಮಾರ್ಚ್ 2017 ರಂದು ಕಾಯಕಯೋಗಿ ಶ್ರೀ.ಸಿದ್ಧರಾಮರ ಚಿಂತನೆಗಳ ಪ್ರಸ್ತುತತೆಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ತುಮಕೂರು ವಿಶ್ವವಿದ್ಯಾನಿಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
 • ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ 14ನೇ, ಏಪ್ರಿಲ್ 2017 ರಂದು ಡಾ.ಬಿ.ಆರ್.ಅಂಬೇಡ್ಕರ್ ರವರ 126ನೇ ಹಾಗೂ ಡಾ.ಬಾಬೂ ಜಗಜೀವನ್ ರಾಂ ರವರ 110ನೇ ಜನ್ಮ ದಿನಾಚರಣೆಕಾರ್ಯಕ್ರಮವನ್ನು ತುಮಕೂರು ವಿಶ್ವವಿದ್ಯಾನಿಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
 • ತುಮಕೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಅಂತರಾಷ್ಟ್ರೀಯ ಸಮ್ಮೇಳನ ಆಯೋಜನಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು. ಇವರ ಸಹಯೋಗದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ರವರ 125ನೇ ಜಯಂತಿ ವರ್ಷಾಚರಣೆಯ ಅಂಗವಾಗಿ ದಿನಾಂಕ: 31.08.2017 ಮತ್ತು 01.09.2017 ರಂದು ತಳ ಸಮುದಾಯಗಳ ಸಾಮಾಜಿಕ ಹೋರಾಟದ ದಾರಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರವರ ಚಿಂತನೆಗಳ ಪ್ರಸ್ತುತತೆ ಎನ್ನುವ ವಿಷಯದ ಕುರಿತು ಎರಡು ದಿನಗಳ ಕಾರ್ಯಗಾರವನ್ನು ತುಮಕೂರು ವಿಶ್ವವಿದ್ಯಾನಿಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ದಿನಾಂಕ: 08.11.2017 ರಂದು ಸಾಧಕರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿ ಎನ್ನುವ ವಿಷಯದ ಕುರಿತು ಒಂದು ದಿನದ ಕಾರ್ಯಕ್ರಮವನ್ನು ತುಮಕೂರು ವಿಶ್ವವಿದ್ಯಾನಿಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
 • ತುಮಕೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರವು ದಿನಾಂಕ 01.01.2018 ರಂದು ಐತಿಹಾಸಿಕ ಭೀಮಾ ಕೋರೇಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ತುಮಕೂರು ವಿಶ್ವವಿದ್ಯಾನಿಲಯದ ಬಯಲು ರಂಗ ಮಂದಿರದಲ್ಲಿ ಸಂಜೆ 6.00ಘಂಟೆಗೆ ಆಯೋಜಿಸಲಾಗಿತ್ತು.
 • ತುಮಕೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಸಹಯೋಗದೊಂದಿಗೆ ದಿನಾಂಕ:03.01.2018 ರಂದು ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾ ಫುಲೆರವರ ಜನ್ಮ ದಿನಾಚರಣೆಯನ್ನು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಹೊರಾಂಗಣದಲ್ಲಿ ಆಚರಿಸಲಾಯಿತು.
 • ತುಮಕೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ರವರ 127ನೇ ಜನ್ಮ ದಿನಾಚರಣೆ ಮತ್ತು ಅದರ ಅಂಗವಾಗಿ 14ನೇ, ಏಪ್ರಿಲ್ 2018 ರಂದುಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಾಂವಿಧಾನಿಕ ಮೌಲ್ಯಗಳುಒಂದು ದಿನದ ಕಾರ್ಯಗಾರವನ್ನು ತುಮಕೂರು ವಿಶ್ವವಿದ್ಯಾನಿಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
 • ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ಓದುಗರನ್ನು ಉತ್ತೇಜಿಸುವ ಹಾಗೂ ವೈಜ್ಞಾನಿಕ, ವೈಚಾರಿಕವಾಗಿ ಆಲೋಚಿಸುವಂತೆ ಪ್ರೇರೇಪಿಸುವ ಸಮಕಾಲೀನ ಸಮಸ್ಯೆಗಳನ್ನು ಎದುರಿಸಲು ಅಗತ್ಯವಿರುವ ಪುಸ್ತಕಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ಗ್ರಂಥಾಲಯ ಮತ್ತು ವಾಚನಾಲಯವನ್ನು ಕಲ್ಪಿಸಲಾಗಿದೆ.
 • ತುಮಕೂರು ಜಿಲ್ಲೆಯ ದಲಿತ ಮಹಿಳೆ ನರಸಮ್ಮನವರ ಜೀವನದ ಯಶೋಗಾಥೆಯನ್ನು ಬಿಂಬಿಸುವ ಡಾ.ಸೂಲಗಿತ್ತಿ ನರಸಮ್ಮನವರ ಜೀವನ ಸಾಧನೆಗಳು ಕುರಿತು ಸಾಕ್ಷ್ಯಾ ಚಿತ್ರ ನಿರ್ಮಾಣ ಮತ್ತು ಬಿಡುಗಡೆಗೊಳಿಸಿರುವುದು.
 • ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ಕ್ಷೇತ್ರ ಕಾರ್ಯದ ಉದ್ದೇಶದಿಂದ ಬರುವ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳಿಗೆ ಕೇಂದ್ರದ ದ್ಯೇಯೋದ್ದೇಶಗಳನ್ನು ಅರ್ಥೈಸಿ ಸ್ಥಳೀಯ ಜನವಸತಿ ಪ್ರದೇಶಗಳಲ್ಲಿ ದಿನಂ ಪ್ರತಿ ಜನರು ಎದುರಿಸುತ್ತಿರುವ ಸಮಕಾಲೀನ ಸಮಸ್ಯೆಗಳನ್ನು ಕ್ಷೇತ್ರಕಾರ್ಯದ ಮೂಲಕ ಅಧ್ಯಯನ ಮಾಡಿ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಪ್ರೇರೇಪಿಸಿ ಕ್ರಿಯಾತ್ಮಕವಾಗಿ ಕಾರ್ಯನ್ಮುಖರಾಗುವಂತೆ ಮಾಡಲಾಗುತ್ತಿದೆ.
 • ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳು ಕ್ಷೇತ್ರಕಾರ್ಯದ ಮೂಲಕ ಸಮೀಕ್ಷೆ ನಡೆಸಿ ಕಂಡುಕೊಂಡ ಸಮಸ್ಯೆಗಳನ್ನು ನಿವಾರಿಸಲು ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಮೂಲಕ ಹಲವು ಆರೋಗ್ಯ ತಪಾಸಣೆ ಶಿಬಿರ, ಜಾಗೃತಿ ಕಾರ್ಯಕ್ರಮ, ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಜನ ಸಮುದಾಯಕ್ಕೆ ಏರ್ಪಡಿಸಲಾಗುತ್ತಿದೆ.

 

 


ಮುಂಬರುವ ಕಾರ್ಯಕ್ರಮಗಳು - Upcoming Events ಹೆಚ್ಚು | All
ಪ್ರಕಟಣೆಗಳು - Announcements ಹೆಚ್ಚು | All
Constitution of Admission Committee for the academic year 2022-23 for admission of students to PG Course.
PG Examinations Final Timetable Oct 2022
2021-22ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ಪದವಿಗಳ ದ್ವಿತೀಯ ಮತ್ತು ನಾಲ್ಕನೇ (ನವೀನ & ಪೂರಕ) ಸೆಮಿಸ್ಟರ್ ಪರೀಕ್ಷೆಗಳ ಪರೀಕ್ಷಾ ಅಂತಿಮ ಪರೀಕ್ಷಾ ವೇಳಾಪಟ್ಟಿ,ಪರೀಕ್ಷಾ ಕೇಂದ್ರ ಘೋಷಣೆ ಹಾಗೂ ಪರೀಕ್ಷಾ ಮುಖ್ಯ ಅಧೀಕ್ಷಕರು ನೇಮಕಾತಿ ಕುರಿತು.
ಸ್ನಾತಕ ಪದವಿಯ SEC & AECC ಪತ್ರಿಕೆಗಳನ್ನು UUCMS ನಲ್ಲಿ ನಮೂದಿಸಿರುವ ಕುರಿತು.
ವಿವಿಧ ಸ್ನಾತಕ ಪದವಿ ಕೋರ್ಸುಗಳ ತರಗತಿಗಳನ್ನು ಅಗತ್ಯವಿದ್ದಲ್ಲಿ ಆನ್ ಲೈನ್ ಮೂಲಕ ನಡೆಸುವ ಕುರಿತು.
ಎಲ್ಲಾ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಪಾವತಿ ಕುರಿತು.
ವಿವಿಧ ಸ್ನಾತಕ ಪದವಿ ಕೋರ್ಸುಗಳ ಪಠ್ಯಕ್ರಮಗಳನ್ನು ಅವಡಿಸಿಕೊಳ್ಳುವ ಕುರಿತು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ (Biotechnology) ವಿಷಯದ ಪಠ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಆಹಾರ ಮತ್ತು ಪೋಷಣೆ (Food & Nutrition) ವಿಷಯದ ಪಠ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು.
2022-23ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕ ಪದವಿ ಕೋರ್ಸುಗಳ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿರುವ ಕುರಿತು.
ಕೋವಿಡ್ ಲಸಿಕಾ ಅಮೃತ್ ಮಹೋತ್ಸವ ಅಭಿಯಾನದಲ್ಲಿ ಮುನ್ನೆಚ್ಚರಿಕೆ ಡೋಸ್ (ಕೋವಿಡ್ ಲಸಿಕಾ) (Precaution Dose) ಲಸಿಕಾಕರಣದ ಪ್ರಗತಿಯನ್ನು ಹೆಚ್ಚಿಸುವ ಕುರಿತು.
ದಿನಾಂಕ: 21.09.2022 ರಂದು ಆಯೋಜಿಸಿರುವ "Challenges & Struggles of Sexual Minorities in India" ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು.
2022 ರ ಅಕ್ಟೋಬರ್ ಮಾಹೆಯಲ್ಲಿ ನಡೆಯಲಿರುವ ಸ್ನಾತಕೋತ್ತರ ಪದವಿಯ ದ್ವಿತೀಯ (ನವೀನ) ಸೆಮಿಸ್ಟರ್ ನಲ್ಲಿ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ನೀಡುವ ಕುರಿತು.
ಸ್ನಾತಕ ಶಿಕ್ಷಣ ಪದವಿಯ 2021-22 ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯ ಕುರಿತು.
ಸ್ನಾತಕೋತ್ತರ ಪದವಿಯ ತೃತೀಯ ಸೆಮಿಸ್ಟರ್ ಪರೀಕ್ಷೆಗಳಿಗೆ (CBCS) ಉತ್ತರ ಪತ್ರಿಕೆಗಳ ಚಾಲೆಂಜ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು.
2021-22 ನೇ ಸಾಲಿನ 2022 ರ ಅಕ್ಟೋಬರ್ / ನವೆಂಬರ್ ಮಾಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿಗಳ ಸೆಮಿಸ್ಟರ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ UUCMS ತಂತ್ರಾಂಶದ ಮೂಲಕ ಪ್ರಥಮ ವರ್ಷದ ದ್ವಿತೀಯ ಸೆಮಿಸ್ಟರ್ ಗೆ ಪ್ರವೇಶ ಪಡೆದಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ಕುರಿತು.
ವಿವಿಧ ಸ್ನಾತಕ ಪದವಿಗಳ ಅಂತಿಮ ಪರೀಕ್ಷಾ ವೇಳಾಪಟ್ಟಿ,ಪರೀಕ್ಷಾ ಕೇಂದ್ರ ಘೋಷಣೆ ಹಾಗೂ ಪರೀಕ್ಷಾ ಮುಖ್ಯ ಅಧೀಕ್ಷಕರು/ ಹೆಚ್ಚುವರಿ ಮುಖ್ಯ ಅಧೀಕ್ಷಕರುಗಳ ನೇಮಕಾತಿ ಕುರಿತು.
ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಬರುವ ವಿವಿಧ ಸ್ನಾತಕ ಪದವಿಗಳ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ವಿತರಿಸುವ ಕುರಿತು.
B.Ed Double the Duration Exam Fee Notification
UG Exam Center and Chief Superintendent Appointment Notification
UG Examinations Sep/Oct 2022 Final Timetable
ದಿನಾಂಕ: 17.09.2022 ರಂದು ತಜ್ಞ ವೈದ್ಯರಿಂದ ಸಕ್ಕರೆ ಖಾಯಿಲೆ ಕುರಿತು ಉಪನ್ಯಾಸ ಹಾಗೂ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿರುವ ಕುರಿತು.
ಸ್ನಾತಕ ಪದವಿ B.Sc Fashion Design IV Semester ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.
ಪ್ರಥಮ ವರ್ಷದ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ Digital Fluency ಕೌಶಲ್ಯಾಭಿವೃದ್ಧಿ ಪತ್ರಿಕೆಯನ್ನು ಕಡ್ಡಾಯವಾಗಿ ನೀಡುವ ಕುರಿತು.
2021-22 ನೇ ಸಾಲಿನ 2022 ರ ಅಕ್ಟೋಬರ್ ಮಾಹೆಯಲ್ಲಿ ನಡೆಯಲಿರುವ ವಿವಿಧ ಸ್ನಾತಕೋತ್ತರ ಪದವಿಗಳ [ಎಂ.ಬಿ.ಎ ಮತ್ತು ಎಂ.ಸಿ.ಎ ಹೊರತುಪಡಿಸಿ] ದ್ವಿತೀಯ ಸೆಮಿಸ್ಟರ್ ನ ಪರೀಕ್ಷೆಗಳಿಗೆ ಸಂಬಂಧಿಸಿದಂತೆ 2021-22 ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ಕುರಿತು.
2021-22 ನೇ ಸಾಲಿನ 2022 ರ ಅಕ್ಟೋಬರ್ ಮಾಹೆಯಲ್ಲಿ ನಡೆಯಲಿರುವ ವಿವಿಧ ಸ್ನಾತಕೋತ್ತರ ಪದವಿಗಳ [ಎಂ.ಬಿ.ಎ ಮತ್ತು ಎಂ.ಸಿ.ಎ ಹೊರತುಪಡಿಸಿ] II(ಪೂರಕ) ಮತ್ತು IV(ನವೀನ ಮತ್ತು ಪೂರಕ) ನೇ ಸೆಮಿಸ್ಟರ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ 2018-19 ನೇ ಶೈಕ್ಷಣಿಕ ಸಾಲಿನಿಂದ 2020-21 ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ಕುರಿತು.
Admission Approval Format (Download Excel File)
2022-23ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕ ಪದವಿ ಕೋರ್ಸುಗಳ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿರುವ ಕುರಿತು.
VI Sem BBM Vivo-voce Examination-2022
ಎಲ್ಲಾ ಸ್ನಾತಕೋತ್ತರ ವಿಭಾಗಗಳಿಂದ ಅಧ್ಯಯನ ಪ್ರವಾಸ / ಶೈಕ್ಷಣಿಕ ಪ್ರವಾಸ / ಕ್ಷೇತ್ರ ಕಾರ್ಯ / ಕೈಗಾರಿಕಾ ಭೇಟಿಗಳಿಗೆ ಅನುಮತಿ ಹಾಗೂ ಮುಂಗಡ ಹಣ ಕೋರಿರುವ ಕುರಿತು.
ನೇತ್ರದಾನ ಪಾಕ್ಷಿಕಾಚರಣೆ ಮತ್ತು ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಕುರಿತು.
ದಿನಾಂಕ: 05.09.2022 ರಂದು ಆಯೋಜಿಸಿರುವ "ವಿಶ್ವವಿದ್ಯಾನಿಲಯದ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ" ಕುರಿತಾದ ಕಾರ್ಯಾಗಾರದಲ್ಲಿ ಭಾಗವಹಿಸುವ ಕುರಿತು.
ದಿನಾಂಕ: 05.09.2022 ರಂದು ಆಚರಿಸಲಿರುವ "ಶಿಕ್ಷಕರ ದಿನಾಚರಣೆ" ಯಲ್ಲಿ ಭಾಗವಹಿಸುವ ಕುರಿತು.
ಸಂಯೋಜನಾ ಪ್ರಕಟಣೆ AFFILIATION NOTIFICATION 2022-23
 
ಟೆಂಡರ್ :ಇ ಪ್ರೋಕ್ಯೂರ್ಮೆಂಟ್ /Tender:Eprocurement
ಇ ಪ್ರೋಕ್ಯೂರ್ಮೆಂಟ್ Eprocurement Portal
ದರಪಟ್ಟಿ Quotations ಹೆಚ್ಚು | All
26-09-2022:  ತುಮಕೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ನ ಸಾವಯವ ರಸಾಯನಶಾಸ್ತ್ರ ವಿಭಾಗಕ್ಕೆ ಉಪಕರಣಗಳನ್ನು ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 11-10-2022 )

26-09-2022:  ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗಕ್ಕೆ"UV Visible Double Beans Spectrophotometer" ಉಪಕರಣಗಳನ್ನು ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 11-10-2022 )

19-09-2022:  ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗಕ್ಕೆ ಪ್ರಯೋಗಾಲಯ ಉಪಕರಣಗಳನ್ನು ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 01-10-2022 )

19-09-2022:  DST-SERB ಯ ಸಂಶೋಧನಾ ಯೋಜನೆಯಡಿಯ ಅನುದಾನದಲ್ಲಿ ಉಪಕರಣಗಳನ್ನು ಸರಬರಾಜು ಮಾಡಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 01-10-2022 )

14-09-2022:  ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗಕ್ಕೆ ಕ್ರೀಡಾ ಸಮವಸ್ತ್ರ, ಟ್ರ್ಯಾಕ್ ಶೂಟ್ ಹಾಗೂ ಬ್ಲೇಜರ್ ನ್ನು ಸರಬರಾಜು ಪಡೆಯಲು ದರಪಟ್ಟಿ ಆಹ್ವಾನಿಸಿರುವ ಬಗ್ಗೆ.  (Last date 26-09-2022 )

 

ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ- ತುಮಕೂರು ವಿಶ್ವವಿದ್ಯಾಲಯ, ತುಮಕೂರು - 2022