ತುಮಕೂರು ವಿವಿ ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗ ಹಾಗೂ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಜಂಟಿಯಾಗಿ ಹಮ್ಮಿಕೊಂಡಿರುವ ಎರಡು ದಿನಗಳ ‘ಸಹಿತ-2’ ಸಾಹಿತ್ಯೋತ್ಸವಕ್ಕೆ ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಮಂಗಳವಾರ ಚಾಲನೆ ನೀಡಿದರು. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ನಾಹಿದಾ ಜಮ್ ಜಮ್, ಪ್ರೊ. ಎಚ್. ಕೆ. ಶಿವಲಿಂಗಸ್ವಾಮಿ, ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಉಪಸ್ಥಿತರಿದ್ದರು. (10-12-2024)
ತುಮಕೂರು ವಿವಿಯ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರವು ಆಯೋಜಿಸಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ 68ನೆಯ ಮಹಾಪರಿನಿಬ್ಬಾಣ ದಿನಾಚರಣೆಯಲ್ಲಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಡಾ. ಬಿ. ಎಂ. ಪುಟ್ಟಯ್ಯ, ಪ್ರೊ. ಪ್ರಸನ್ನ ಕುಮಾರ್ ಕೆ., ಪ್ರೊ. ಕೇಶವ ಇದ್ದಾರೆ. (06-12-2024)
ತುಮಕೂರು ವಿವಿಯ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ 75ನೆಯ ಸಂವಿಧಾನ ದಿನಾಚರಣೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ಜಯಂತ್ ಕುಮಾರ್, ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ನೂರುನ್ನೀಸಾ, ನಾಹಿದಾ ಜಮ್ ಜಮ್, ಪ್ರೊ. ಪ್ರಸನ್ನಕುಮಾರ್ ಕೆ., ಪ್ರೊ. ಕೇಶವ, ಪ್ರಿಯದರ್ಶಿನಿ ಇದ್ದಾರೆ. (26-11-2024)
ತುಮಕೂರು ವಿವಿಯು ಆಯೋಜಿಸಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿಭು ಅಕಾಡೆಮಿಯ ಮುಖ್ಯಸ್ಥೆ ಡಾ. ವಿ. ಬಿ. ಆರತಿ ‘ಸಮರ್ಥ ಚಿಂತನೆ ಮತ್ತು ವಿಕಸಿತ ಪಥ’ ವಿಷಯದ ಕುರಿತು ಮಾತನಾಡಿದರು. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಸ್ವಾಮಿ ಜಪಾನಂದಜೀ, ನಾಹಿದಾ ಜಮ್ ಜಮ್, ಪ್ರೊ. ಪ್ರಸನ್ನ ಕುಮಾರ್ ಕೆ., ಪ್ರೊ. ರವೀಂದ್ರ ಕುಮಾರ್ ಬಿ., ಇನ್ನಿತರರು ಇದ್ದಾರೆ. (21-11-2024)
ತುಮಕೂರು ವಿವಿಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಆಯೋಜಿಸಿದ್ದ ಶಾಸನ ಡಿಪ್ಲೋಮಾ ತರಗತಿಗಳ ಉದ್ಘಾಟನೆಯನ್ನು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ನೆರವೇರಿಸಿದರು. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಪ್ರೊ. ಎಂ. ಕೊಟ್ರೇಶ್, ಪ್ರೊ. ಎಲ್. ಪಿ. ರಾಜು, ಡಾ. ಚಿಕ್ಕಣ್ಣ ಇದ್ದಾರೆ. (20-11-2024)
ತುಮಕೂರು ವಿವಿಯ ಗ್ರಂಥಾಲಯ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಯೋಜಿಸಿದ್ದ ‘ಗ್ರಂಥಾಲಯದ ಅರಿವು ಮತ್ತು ಇ-ಸಂಪನ್ಮೂಲಗಳ ಬಳಕೆ ಮತ್ತು ಉಪಯೋಗ’ ಕಾರ್ಯಕ್ರಮವನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಉದ್ಘಾಟಿಸಿದರು. ಡಾ. ಬಿ. ರವಿವೆಂಕಟ್, ಪ್ರೊ. ಎಂ. ಕೊಟ್ರೇಶ್, ಡಾ. ಬಿ. ಕುಮಾರ, ಡಾ. ದೇವರಕೊಂಡಾ ರೆಡ್ಡಿ ಇದ್ದಾರೆ. (20-11-2024)
ತುಮಕೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರವು ಪೊಲೀಸ್ ಬೇಟೆ ಕನ್ನಡ ವಾರ ಪತ್ರಿಕೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಮಹಿಳಾ ಸಬಲೀಕರಣ ಎತ್ತ ಸಾಗಿದೆ?’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷೀ ಚೌಧರಿ ಉದ್ಘಾಟಿಸಿದರು. ಕುಲಸಚಿವೆ ನಾಹಿದಾ ಜಮ್ ಜಮ್, ವಚನಾನಂದ ಸ್ವಾಮೀಜಿ, ಡಾ. ಎಸ್. ಸಿದ್ದರಾಮಣ್ಣ, ಡಾ. ಜ್ಯೋತಿ ಇದ್ದಾರೆ. (19-11-2024)