ದಿನಾಂಕ: 24-03-2025ರಂದು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಹಮ್ಮಿಕೊಂಡಿದ್ದ ಅಂತರಕಾಲೇಜು ಸಾಂಪ್ರದಾಯಿಕ, ಕಲಾತ್ಮಕ ಮತ್ತು ಲಯಬದ್ಧ ಯೋಗದ ಕುರಿತ ಕಾರ್ಯಾಗಾರದ ಉದ್ಘಾಟನೆಯಲ್ಲಿ ರಾಜೇಶ್ ಆಚಾರ್, ಡಾ. ಶೇಟ್ ಪ್ರಕಾಶ್, ಡಾ. ಎ.ಎಂ. ಮಂಜುನಾಥ್ ಮತ್ತಿತರರು ಇದ್ದಾರೆ.
ದಿನಾಂಕ: 24-03-2025ರಂದು ತುಮಕೂರು ವಿವಿಯಲ್ಲಿ ನಡೆದ ಅಹಲ್ಯಾಬಾಯಿ ಹೋಳ್ಕರ್ ಕುರಿತ ವಿಶೇಷ ಉಪನ್ಯಾಸವನ್ನು ಲೇಖಕ ಆಶುತೋಷ್ ಅದೋನಿ ಉದ್ಘಾಟಿಸಿದರು. ಡಾ. ಪ್ರಸನ್ನಕುಮಾರ್ ಕೆ., ಡಾ. ಕೆ. ರಾಜೀವಲೋಚನ, ವಿದುಷಿ ವೀಣಾ ಸಿ. ಶೇಷಾದ್ರಿ ಇದ್ದಾರೆ.
ತುಮಕೂರು ವಿವಿಯ ಮಧ್ಯಾಹ್ನದ ಭೋಜನ ಯೋಜನೆ ಮೂರನೆಯ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಸ್ವಾಮಿ ಜಪಾನಂದಜಿ, ಪ್ರೊ. ಎಂ. ವೆಂಕಟೇಶ್ವರಲು, ನಾಹಿದಾ ಜ಼ಮ್ ಜ಼ಮ್, ಮುಂತಾದವರು ಉಪಸ್ಥಿತರಿದ್ದರು.
ತುಮಕೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಆಯೋಜಿಸಿದ್ದ ಐಸಿಎಸ್ಎಸ್ಆರ್ ಪ್ರಾಯೋಜಿತ ಸಂಶೋಧನಾ ವಿಧಾನ ಕುರಿತ ಹತ್ತು ದಿನಗಳ ಕಾರ್ಯಗಾರವನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ದಿನಾಂಕ: 12-03-2025ರಂದು ಉದ್ಘಾಟಿಸಿದರು. ಪ್ರೊ. ಜಯಶೀಲ, ಪ್ರೊ. ವಿಲಾಸ್ ಕದ್ರೋಲ್ಕರ್, ಪ್ರೊ. ಬಿ. ರವೀಂದ್ರ ಕುಮಾರ್, ಡಾ. ಮುನಿರಾಜು ಎಂ., ಡಾ. ನೀಲಕಂಠ ಎನ್. ಟಿ. ಇದ್ದಾರೆ.
ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಪರಿಸರ ವಿಜ್ಞಾನ ವಿಭಾಗ ದಿನಾಂಕ: 17-02-2025ರಂದು ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಉದ್ಘಾಟಿಸಿದರು. ನಾಹಿದಾ ಜ಼ಮ್ ಜ಼ಮ್, ಪ್ರೊ. ಎಂ. ಶೇಟ್ ಪ್ರಕಾಶ್ ಹಾಗೂ ಡಾ. ಪೂರ್ಣಿಮ ಡಿ. ಇದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ ದಿನಾಂಕ: 13-03-2025ರಂದು ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಿವೃತ್ತ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಜೆ. ಸುರೇಶ್ ಉದ್ಘಾಟಿಸಿದರು. ಪ್ರೊ. ಪ್ರಸನ್ನ ಕುಮಾರ್ ಕೆ., ಪ್ರೊ. ಜಯಶೀಲ, ಪ್ರೊ. ವಿಲಾಸ್ ಕದ್ರೋಲ್ಕರ್, ಡಾ. ಮುನಿರಾಜು ಎಂ., ಡಾ. ನೀಲಕಂಠ ಎನ್.ಟಿ. ಇದ್ದಾರೆ.
ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಮಹತ್ವಾಕಾಂಕ್ಷಿ ಯೋಜನೆ ‘ಮಿಶನ್ ಉತ್ಥಾನ್’ನ ಉದ್ಘಾಟನಾ ಸಮಾರಂಭದಲ್ಲಿ ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಭಾಗವಹಿಸಿದರು. ಸ್ಟಾçಟೆಜಿಕ್ ಅಲಯನ್ಸ್ ನಿರ್ದೇಶಕಿ ಡಾ. ಸಪ್ನಾ ಪೋತಿ ಇದ್ದಾರೆ.