ತುಮಕೂರು ವಿಶ್ವವಿದ್ಯಾನಿಲಯವು ಆಯೋಜಿಸಿದ್ದ 69ನೆಯ ಕನ್ನಡ ರಾಜ್ಯೋತ್ಸವದಲ್ಲಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ನಾಹಿದಾ ಜಮ್ ಜಮ್, ನರಸಿಂಹಮೂರ್ತಿ, ಡಾ. ಎ. ಎಂ. ಮಂಜುನಾಥ, ಪ್ರೊ. ಶಿವಲಿಂಗಸ್ವಾಮಿ ಎಚ್. ಕೆ., ಇತರರು ಇದ್ದಾರೆ.(01-11-2024)
ತುಮಕೂರು ವಿವಿಯ ರಮಣ ಮಹರ್ಷಿ ಅಧ್ಯಯನ ಪೀಠವು ಆಯೋಜಿಸಿದ್ದ ‘ಆಧುನಿಕತೆಯ ಹಿನ್ನಲೆಯಲ್ಲಿ ರಮಣ ಮಹರ್ಷಿಗಳ ಚಿಂತನೆಗಳ ಪ್ರಸ್ತುತತೆ' ವಿಷಯದ ಕುರಿತ ವಿಚಾರ ಸಂಕಿರಣವನ್ನು ಸಾಹಿತಿ ಡಾ. ಜಿ. ಬಿ. ಹರೀಶ್ ಉದ್ಘಾಟಿಸಿದರು. ಡಾ. ರಾಜೀವಲೋಚನ, ಡಾ. ಸುಬ್ರಹ್ಮಣ್ಯ ಶರ್ಮಾ ವಿ., ಡಾ. ಗೀತಾ ವಸಂತ, ವಿನಾಯಕ ಇದ್ದಾರೆ.(24-10-2024)
ತುಮಕೂರು ವಿವಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ಕೌಶಲ್ಯಾಭಿವೃದ್ಧಿ ಘಟಕ, ವಿವಿ ವಿಜ್ಞಾನ ಕಾಲೇಜು, ಕಲಾ ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗಗಳ ವತಿಯಿಂದ ಆಯೋಜಿಸಿದ್ದ ಪ್ರೇರಣಾ ಉಪನ್ಯಾಸ ಮಾಲೆಯನ್ನು ಶಿಕ್ಷಣ ತಜ್ಞ ಡಾ. ವೂಡೇ ಪಿ. ಕೃಷ್ಣ ಉದ್ಘಾಟಿಸಿದರು. ಪ್ರೊ. ಎಂ. ವೆಂಕಟೇಶ್ವರಲು, ಸ್ವಾಮಿ ಜಪಾನಂದಜೀ, ನಾಹಿದಾ ಜಮ್ ಜಮ್, ಪ್ರೊ. ಪ್ರಸನ್ನಕುಮಾರ್ ಕೆ., ಪ್ರೊ. ಪರಶುರಾಮ ಕೆ. ಜಿ., ಪ್ರೊ. ಬಸವರಾಜ ಜಿ., ಪ್ರೊ. ಪ್ರಕಾಶ್ ಎಂ. ಶೇಟ್ ಇದ್ದಾರೆ. (24-10-2024)
ತುಮಕೂರು ವಿವಿಯ ವ್ಯವಹಾರ ಆಡಳಿತ ಅಧ್ಯಯನ ವಿಭಾಗವು ವಿಷನ್ ಕರ್ನಾಟಕ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ‘ವ್ಯವಹಾರದ ಸುಸ್ಥಿರ ಪರಿಸರ ವ್ಯವಸ್ಥೆಗಾಗಿ ಡಿಜಿಟಲೀಕರಣ ಮತ್ತು ನಾವೀನ್ಯತೆ’ ಕುರಿತು ರಾಷ್ಟ್ರೀಯ ಸಮ್ಮೇಳನವನ್ನು ಬೆಳಗಾವಿಯ ರಾಣಿಚೆನ್ನಮ್ಮ ವಿವಿಯ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಉದ್ಘಾಟಿಸಿದರು. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಉಮಾ ರೆಡ್ಡಿ, ಸುಧೀರ್ ಮಧುಗಿರಿ, ಕಿಶೋರ್ ಜಾಗರ್ಧರ್, ಪ್ರೊ. ಪ್ರಸನ್ನಕುಮಾರ್ ಕೆ., ಪ್ರೊ. ನೂರ್ ಅಫ್ಜಾ, ಪ್ರೊ. ಎ. ಮೋಹನ್ ರಾಮ್ ಇದ್ದಾರೆ.
ತುಮಕೂರು ವಿವಿಯ ನೂತನ ‘ಜ್ಞಾನಸಿರಿ’ ಕ್ಯಾಂಪಸ್ಗೆ ಕೆಎಸ್ಆರ್ಟಿಸಿ ದೈನಂದಿನ ಬಸ್ ಸಂಚಾರಕ್ಕೆ ಚಾಲನೆ: ಬಸ್ ಸೇವೆಗೆ ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ಚಾಲನೆ ನೀಡಿದರು. ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್, ತುಮಕೂರಿನ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಕ ಎಸ್. ಚಂದ್ರಶೇಖರ್ ಇದ್ದಾರೆ. (09-10-2024)
ತುಮಕೂರು ವಿವಿಯಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯಲ್ಲಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ನಾಹಿದಾ ಜಮ್ ಜಮ್, ಪ್ರೊ. ಪ್ರಸನ್ನ ಕುಮಾರ್ ಕೆ., ಡಾ. ಮಂಜುನಾಥ್ ಎ. ಎಂ., ಡಾ. ಹೇಮಾವತಿ ಬಿ. ಎನ್., ಡಾ. ರಾಜಲಕ್ಷ್ಮೀ ಗೋವನಕೊಪ್ಪ, ಶ್ವೇತಾ ಓ. ಎಸ್. ಇದ್ದಾರೆ.(02-10-2024)
ತುಮಕೂರು ವಿವಿಯು ಸಮರ್ಥನಂ ಅಂಗವಿಕಲರ ಸಂಸ್ಥೆ (ರಿ.) ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಕುಲಸಚಿವೆ ನಾಹಿದಾ ಜಮ್ ಜಮ್ ಉದ್ಘಾಟಿಸಿದರು. ಪ್ರೊ. ಪ್ರಸನ್ನಕುಮಾರ್ ಕೆ., ಪ್ರೊ. ಪರಶುರಾಮ ಕೆ. ಜಿ., ಸತೀಶ್ ಕೆ., ಸುಭಾಷ್ ಚಂದ್ರ ಎಸ್., ವಿನಾಯಕ್ ಪಿ. ಎಲ್. ಇದ್ದಾರೆ. (24-09-2024)