ಕನ್ನಡದ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಅವರು ‘ಭಾಷೆ, ಸಂಸ್ಕೃತಿ ಮತ್ತು ಯುವಜನತೆ’ ಕುರಿತು ತುಮಕೂರು ವಿ.ವಿ.ಯಲ್ಲಿ ಪ್ರೇರಣೋಪನ್ಯಾಸ ನೀಡಿದರು. ಶ್ರೀ ಸ್ವಾಮಿ ಜಪಾನಂದಜೀ ಮಹಾರಾಜ್, ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು, ಶ್ರೀಮತಿ ನಾಹಿದಾ ಜಮ್ ಜಮ್, ಪ್ರೊ. ಕೆ. ಪ್ರಸನ್ನಕುಮಾರ್, ಪ್ರೊ. ರವೀಂದ್ರಕುಮಾರ್ ಬಿ. ಇದ್ದಾರೆ. (20-01-2025)
ತುಮಕೂರು ವಿವಿ ‘ಕಲ್ಪತರು ಉತ್ಸವ’ವನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಉದ್ಘಾಟಿಸಿದರು. ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರಾದ ಅನಿರುದ್ಧ್ ಜಟ್ಕರ್, ಅನುಷಾ ರಾಯ್, ದೀಪಿಕಾ ದಾಸ್, ಕುಲಸಚಿವರಾದ ಶ್ರೀಮತಿ ನಾಹಿದಾ ಜಮ್ ಜಮ್, ಪ್ರೊ. ಕೆ. ಪ್ರಸನ್ನಕುಮಾರ್, ಪ್ರೊ. ಬಸವರಾಜ ಜಿ., ಡಾ. ದೇವರಾಜ್ ಎಸ್. ಇದ್ದಾರೆ. (17-01-2025)
ತುಮಕೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ವಿವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಪ್ರಜಾಪ್ರಗತಿ ದಿನಪತ್ರಿಕೆ-ಪ್ರಗತಿ ಟಿವಿ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಸೈಬರ್ ಅಪರಾಧ ಜಾಗೃತಿ ಅಭಿಯಾನ’ದ ಉದ್ಘಾಟನೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ವಿ. ಅಶೋಕ್ ನೆರವೇರಿಸಿದರು. ಪ್ರೊ. ಎಂ. ವೆಂಕಟೇಶ್ವರಲು, ಎಸ್. ನಾಗಣ್ಣ, ನೂರುನ್ನೀಸಾ, ಪ್ರೊ. ಬಿ. ಕರಿಯಣ್ಣ, ವಿನಾಯಕ ಶೆಟಗೇರಿ, ಡಾ. ಸಿಬಂತಿ ಪದ್ಮನಾಭ ಕೆ. ವಿ. ಇದ್ದಾರೆ. (07-01-2025)
ವಿವಿ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗವು ಸಾವಿತ್ರಿಬಾಯಿ ಫುಲೆ ಹಾಗೂ ಕುವೆಂಪು ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿ ಬಾ. ಹ. ರಮಾಕುಮಾರಿ ಹಾಗೂ ಕುಲಸಚಿವೆ ನಾಹಿದಾ ಜಮ್ ಜಮ್ ಅವರು ‘ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ ಸ್ವೀಕರಿಸಿದರು. ಪ್ರೊ. ಪ್ರಸನ್ನಕುಮಾರ್ ಕೆ., ಪ್ರೊ. ಬಿ. ಕರಿಯಣ್ಣ, ಪ್ರೊ. ರಮೇಶ್ ಬಿ., ಪ್ರೊ. ಪರಶುರಾಮ ಕೆ. ಜಿ., ಡಾ. ಗಿರಿಜಾ ಕೆ. ಎಸ್. ಇದ್ದಾರೆ. (06-01-2024)
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರಿಗೆ ತುಮಕೂರು ವಿಶ್ವವಿದ್ಯಾನಿಲಯದ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್ ಉಪಸ್ಥಿತರಿದ್ದರು. (04-01-2024)
ತುಮಕೂರು ವಿಶ್ವವಿದ್ಯಾನಿಲಯ ಜೀವತಂತ್ರಜ್ಞಾನ ಮತ್ತು ಸೂಕ್ಷ್ಮ ಜೀವವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗವು ಆಯೋಜಿಸಿದ್ದ ನೂತನ ಸ್ನಾತಕೋತ್ತರ ಮತ್ತು ಸಂಶೋಧನಾ ಪ್ರಯೋಗಾಲಯಗಳ ಉದ್ಘಾಟನೆ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷ್ಮ ಜೀವವಿಜ್ಞಾನ ಕೌಶಲ್ಯ ವಿಜ್ಞಾನ ಕಾರ್ಯಕ್ರಮಕ್ಕೆ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಚಾಲನೆ ನೀಡಿದರು. ಪ್ರೊ. ಹರಿಕೇಶ್ ಬಹದ್ದೂರ್ ಸಿಂಗ್, ಡಾ. ನರಸಿಂಹ ಪ್ರಸಾದ್, ಗುರುಪ್ರಸಾದ್ ನರಸಿಂಹ, ನಾಹಿದಾ ಜಮ್ ಜಮ್, ಡಾ. ಶರತ್ಚಂದ್ರ ಇದ್ದಾರೆ. (26-12-2024)
ತುಮಕೂರು ವಿವಿಯಲ್ಲಿ ಆಯೋಜಿಸಿರುವ 20ನೆಯ ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ ಸಮ್ಮೇಳನವನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಸೋಮವಾರ ಉದ್ಘಾಟಿಸಿದರು. ಪ್ರೊ. ಆರ್. ಎಲ್. ಎಂ. ಪಾಟೀಲ್, ನಾಹಿದಾ ಜಮ್ ಜಮ್, ಪ್ರೊ. ಪ್ರಸನ್ನಕುಮಾರ್ ಕೆ., ಎಚ್. ಎಂ. ರಾಜಶೇಖರ್, ರವಿ ಜೋಶಿ, ಪ್ರೊ. ಬಸವರಾಜ ಜಿ., ಪ್ರೊ. ಪಿ. ಎಸ್. ಜಯರಾಮು, ಪ್ರೊ. ಜಯಪ್ರಕಾಶ್ ಮಾವಿನಕುಳಿ, ಡಾ. ಟಿ. ಜಿ. ನಾಗಭೂಷಣ, ಡಾ. ನಾಗರಾಜು ಎಂ. ಎಸ್. ಇದ್ದಾರೆ. (23-12-2024)
ತುಮಕೂರು ವಿವಿಯ ಯೋಗ ಅಧ್ಯಯನ ಮತ್ತು ಸಂಶೋಧನ ವಿಭಾಗವು 21-12-2024 ಆಯೋಜಿಸಿದ್ದ ‘ವಿಶ್ವ ಧ್ಯಾನ ದಿನ’ ಆಚರಣೆಯಲ್ಲಿ ಭಾಗವಹಿಸಿದ್ದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಪ್ರೊ. ಪ್ರಸನ್ನಕುಮಾರ್ ಕೆ., ಡಾ. ಎಂ. ಕೆ. ನಾಗರಾಜರಾವ್, ಡಾ. ಎ. ಎಂ. ಮಂಜುನಾಥ, ಇನ್ನಿತರರು ಇದ್ದಾರೆ.